ಬೆಂಗಳೂರು: ಈ ತಿಂಗಳು ಪ್ರಮುಖ OTT ವೇದಿಕೆಗಳಲ್ಲಿ ಹಲವು ಕನ್ನಡ ಚಿತ್ರಗಳು ಮತ್ತು ವೆಬ್ ಸರಣಿಗಳು ಪ್ರೀಮಿಯರ್ ಆಗಲಿವೆ. ಚಿತ್ರಮಂದಿರಗಳ ಜೊತೆಗೆ ಡಿಜಿಟಲ್ ಪ್ರೇಕ್ಷಕರಿಗೂ ಹಬ್ಬದೂಟ ನಿಶ್ಚಿತ.

ಕ್ರೈಂ ಥ್ರಿಲ್ಲರ್, ಹಳ್ಳಿ ಹಿನ್ನೆಲೆಯ ಹಾಸ್ಯ, ಐತಿಹಾಸಿಕ ಕಥಾನಕ ಹೀಗೆ ವೈವಿಧ್ಯಮಯ ವಿಷಯಗಳು ಪಟ್ಟಿಯಲ್ಲಿವೆ. ಡಬ್ಬಿಂಗ್ ಆವೃತ್ತಿಗಳೊಂದಿಗೆ ಪರಭಾಷಾ ಪ್ರೇಕ್ಷಕರನ್ನೂ ಗುರಿಯಾಗಿಸಲಾಗಿದೆ.

ಡಿಜಿಟಲ್ ಹಕ್ಕುಗಳ ಮೊತ್ತ ಏರುತ್ತಿರುವುದು ಕನ್ನಡ ಉದ್ಯಮಕ್ಕೆನೆರವಾಗಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.

ಬಿಡುಗಡೆ ದಿನಾಂಕಗಳ ಅಧಿಕೃತ ಘೋಷಣೆ ಹಂತಹಂತವಾಗಿ ಹೊರಬರಲಿದೆ.